+91 99628 00003
care@rjrherbalhospitals.com
ಸೋಮ-ಶನಿ: 9 AM - 7 PM
RJR Herbal Hospitals Logo

ನಮ್ಮ ಬಗ್ಗೆ(About Us)

150+ ವರ್ಷಗಳ ಸಿದ್ಧ ಮತ್ತು ಆಯುರ್ವೇದ ವೈದ್ಯಕೀಯ ಪರಂಪರೆ, ನಿಮ್ಮ ಆರೋಗ್ಯಕ್ಕಾಗಿಯೇ ಸಮರ್ಪಿತ.

ನಮ್ಮ ಮೂಲ ತತ್ವ

ನೈಸರ್ಗಿಕ ರೀತಿಯಲ್ಲಿ ರೋಗ ನಿವಾರಣೆ,
ನಿಮ್ಮ ಆರೋಗ್ಯಕರ ಜೀವನಕ್ಕಾಗಿ
- ಆರ್.ಜೆ.ಆರ್ ಹರ್ಬಲ್ ಆಸ್ಪತ್ರೆ.

ಆರ್.ಜೆ.ಆರ್ ಹರ್ಬಲ್ ಆಸ್ಪತ್ರೆಯು ಶತಮಾನಗಳ ಆಯುರ್ವೇದ ಜ್ಞಾನ ಮತ್ತು ಸಿದ್ಧ, ಆಯುರ್ವೇದ ವೈದ್ಯಕೀಯ ಪದ್ಧತಿಗಳ ಸಂಗಮವಾಗಿರುವ ಒಂದು ನೈಸರ್ಗಿಕ ಚಿಕಿತ್ಸಾಲಯವಾಗಿದೆ. 2008 ರಲ್ಲಿ ಡಾ. ಎಸ್.ಆರ್. ಜಯದುರೈ (B.Sc, B.N.Y.S, PGDYN, DVM) ಅವರಿಂದ ಈ ಆಸ್ಪತ್ರೆ ಸ್ಥಾಪಿತವಾಯಿತು.

ನೈಜವಾದ, ಪರಿಪೂರ್ಣ ಮತ್ತು ನೈಸರ್ಗಿಕ ವೈದ್ಯಕೀಯ ಸೇವೆಗಳನ್ನು ಎಲ್ಲರಿಗೂ ತಲುಪಿಸುವುದೇ ಇದರ ಸರಳ ಮತ್ತು ಆಳವಾದ ಉದ್ದೇಶವಾಗಿದೆ.

ನಮ್ಮ ಸಂಸ್ಥಾಪಕರು

ಡಾ. ಎಸ್.ಆರ್. ಜಯದುರೈ

B.Sc, B.N.Y.S, PGDYN, DVM

ನಮ್ಮ ಸಂಸ್ಥಾಪಕರಾದ ಶ್ರೀ ಎಸ್.ಆರ್. ಜಯದುರೈ ಅವರು ತೂತುಕುಡಿಯ ಸರಳ ಕೃಷಿ ಕುಟುಂಬದಲ್ಲಿ ಜನಿಸಿದರು. ಮಣ್ಣನ್ನು ಪ್ರೀತಿಸುವ ರೈತನ ಮಗನಾಗಿ, ಅವರು ತಮ್ಮ ತಂದೆಯಿಂದ ತಾಳ್ಮೆ ಮತ್ತು ಪ್ರಕೃತಿಯ ಮೇಲಿನ ಗೌರವವನ್ನು ಕಲಿತರು.

ಗ್ರಾಮೀಣ ವೈದ್ಯರಾಗಿದ್ದ ಅವರ ಅಜ್ಜ ಪೊನ್ನಯ್ಯ ಪೈಲ್ವಾನ್ ಮತ್ತು ಸೋದರಮಾವಂದಿರಿಂದ ಪ್ರೇರಣೆ ಪಡೆದ ಅವರು, ಬಾಲ್ಯದಿಂದಲೇ ಗಿಡಮೂಲಿಕೆಗಳ ಶಕ್ತಿಯನ್ನು ಅರಿತಿದ್ದರು. ಇಂದು ಅವರ ನೇತೃತ್ವದಲ್ಲಿ RJR ಸಾವಿರಾರು ರೋಗಿಗಳ ಬಾಳಲ್ಲಿ ಬೆಳಕಾಗಿದೆ.

ಡಾ. ಎಸ್.ಆರ್. ಜಯದುರೈ - ಸಂಸ್ಥಾಪಕರು, ಆರ್.ಜೆ.ಆರ್ ಹರ್ಬಲ್ ಆಸ್ಪತ್ರೆ
ನಮ್ಮ ಪ್ರಗತಿ

ನಮ್ಮ ಕಥೆ - 150+ ವರ್ಷಗಳ ಪರಂಪರೆ

1870

ಸಿದ್ದ ವೈದ್ಯಕೀಯದ ಬೇರುಗಳು

ಆರ್.ಜೆ.ಆರ್ ಹರ್ಬಲ್ ಆಸ್ಪತ್ರೆಯ ಪಯಣವು ಸ್ಥಾಪಕರಾದ ಡಾ. ಎಸ್.ಆರ್. ಜಯದುರೈ ಅವರ ತಾತ ಪೊನ್ನಯ್ಯ ಪೈಲ್ವಾನ್ ಅವರ ಕಾಲದಿಂದಲೇ ಪ್ರಾರಂಭವಾಯಿತು. ಶ್ರೀಲಂಕಾದ ರಾಜವಂಶಸ್ಥರು ಮತ್ತು ಉನ್ನತ ವರ್ಗದ ಜನರಿಗೆ ನಂಬಿಕಸ್ಥ ವೈದ್ಯಕೀಯ ಸಲಹೆಗಾರರಾಗಿದ್ದರು.

1900

ಪಾರಂಪರೆ ಮತ್ತು ಮೌಲ್ಯಗಳ ರಕ್ಷಣೆ

ಪಾರಂಪರಿಕ ವೈದ್ಯರ ಕುಟುಂಬದಿಂದ ಬಂದ ಪೊನ್ನಯ್ಯ ಪೈಲ್ವಾನ್ ಅವರು, ಪ್ರಾಚೀನ ಆಯುರ್ವೇದ ತತ್ವಗಳು ಅವುಗಳ ಶುದ್ಧ ರೂಪದಲ್ಲಿ ಸಂರಕ್ಷಿಸಲ್ಪಡಬೇಕೆಂದು ಬಯಸಿದರು. ಗಿಡಮೂಲಿಕೆ ಔಷಧಿ ಜ್ಞಾನವನ್ನು ಮಕ್ಕಳಿಗೂ ಧಾರೆ ಎರೆದರು.

1950

ಸೇವೆ ಮತ್ತು ಸಮರ್ಪಣೆ

ಚಿಕಿತ್ಸೆಗಳು ಕೇವಲ ಪರಿಣಾಮಕಾರಿಯಾಗಿರದೆ, ಎಲ್ಲರಿಗೂ ಕೈಗೆಟುಕುವಂತಿರಬೇಕು. ಡಾ. ಎಸ್.ಆರ್. ಜಯದುರೈ ಅವರ ಮುತ್ತಜ್ಜ, ದೀರ್ಘಕಾಲದ ಉಬ್ಬಸ (Asthma), ಕೀಲು ನೋವುಗಳಿಗೆ ಚಿಕಿತ್ಸೆ ನೀಡಿ ಗ್ರಾಮೀಣ ವೈದ್ಯರಾಗಿ ಬೆಳೆದರು.

1990

ಆರ್.ಜೆ.ಆರ್ ಆಸ್ಪತ್ರೆಯ ಉದಯ

ಡಾ. ಎಸ್.ಆರ್. ಜಯದುರೈ ಅವರು ತಮ್ಮ BNYS ಪದವಿ ಮತ್ತು DVM (Diploma in Varmam) ಪದವಿಯನ್ನು ಸರ್ಕಾರಿ ಕಾಲೇಜುಗಳಲ್ಲಿ ಪೂರೈಸಿ, ವೈಜ್ಞಾನಿಕವಾಗಿ ದೃಢಪಟ್ಟ ಗಿಡಮೂಲಿಕೆ ಔಷಧಿಗಳ ಸಂಶೋಧನೆ ನಡೆಸಿ ಆಸ್ಪತ್ರೆಗೆ ಬುನಾದಿ ಹಾಕಿದರು.

ಇಂದು

104+ ಶಾಖೆಗಳೊಂದಿಗೆ ಬೃಹತ್ ಬೆಳವಣಿಗೆ

ಇಂದು, ಶ್ರೀ ಎಸ್.ಆರ್. ಜಯದುರೈ ಮತ್ತು ಶ್ರೀಮತಿ ಸೆಲ್ವಿ ಜಯದುರೈ ಅವರ ನೇತೃತ್ವದಲ್ಲಿ ದಕ್ಷಿಣ ಭಾರತದಾದ್ಯಂತ 104 ಕ್ಕೂ ಹೆಚ್ಚಿನ ಶಾಖೆಗಳೊಂದಿಗೆ RJR ಆಸ್ಪತ್ರೆ ಲಕ್ಷಾಂತರ ಜನರಿಗೆ ಆಪರೇಷನ್ ಇಲ್ಲದೆ ಆರೋಗ್ಯವನ್ನು ನೀಡುತ್ತಿದೆ.

ನಮ್ಮ ಗುರಿ

ನಮ್ಮ ಉದ್ದೇಶ ಮತ್ತು ಧ್ಯೇಯೋದ್ದೇಶಗಳು

ನಮ್ಮ ವಿಷನ್ (Vision)

“ರೋಗಮುಕ್ತ ಸಮಾಜವನ್ನು ನಿರ್ಮಿಸುವುದೇ” ನಮ್ಮ ಮುಖ್ಯ ಉದ್ದೇಶ. ಪ್ರತಿಯೊಬ್ಬರಿಗೂ ನೈಸರ್ಗಿಕ ಮತ್ತು ಸುಲಭವಾಗಿ ದೊರೆಯುವ ಚಿಕಿತ್ಸೆಯನ್ನು ನೀಡಲು ಬದ್ಧವಾಗಿದ್ದೇವೆ.

ನಮ್ಮ ಮಿಷನ್ (Mission)

ಸಿದ್ಧ ಮತ್ತು ಆಯುರ್ವೇದ ವೈದ್ಯಕೀಯ ಸಾರವನ್ನು ಯುವ ಪೀಳಿಗೆಗೂ ತಲುಪಿಸುವುದು ಹಾಗೂ ಅತ್ಯಾಧುನಿಕ ಸಂಶೋಧನೆಗಳ ಮೂಲಕ ಗಿಡಮೂಲಿಕೆ ಔಷಧಗಳನ್ನು ಅಭಿವೃದ್ಧಿಪಡಿಸುವುದು.

ಮೌಲ್ಯಗಳು (Values)

ರೋಗಿಗಳ ಆರೋಗ್ಯ ಹಿತಾಸಕ್ತಿ, ವೈದ್ಯಕೀಯ ಪ್ರಾಮಾಣಿಕತೆ ಮತ್ತು ನಂಬಿಕಸ್ಥ ಗಿಡಮೂಲಿಕೆ ಚಿಕಿತ್ಸೆ. ನಮ್ಮ ಚಿಕಿತ್ಸೆಗಳ ಕೇಂದ್ರಬಿಂದು ರೋಗಿಗಳ ನೆಮ್ಮದಿಯಾಗಿದೆ.